Saturday, July 24, 2010

ಇರುವುದೆಲ್ಲವ ಬಿಟ್ಟು..


ಇಂದಿನ ದಿನಗಳಲ್ಲಿ ಸಂಸಾರ ಹೂಡಿದ ಮನೆಯೆಂದರೆ Fridge,T.V(Dish/Cable ಸಹಿತ),CD Player,Washing
Machine, Air Cooler etc ಇರಲೇಬೇಕೆಂಬುದು ಮನೆಯ ಎಲ್ಲ ಸದಸ್ಯರ ಅಭಿಮತ.ಸುಲಭದ ಅಡುಗೆಗೆ Mixy,Grinder,Non stick ಪಾತ್ರೆಗಳು,Gas ಮುಂತಾದವು ಅಗತ್ಯದ ಜೊತೆಗೆ ಅನಿವಾರ್ಯವೆನ್ನುವುದು ಎಲ್ಲ ಗ್ರಹಿಣಿಯರ ಒಕ್ಕೊರಲಾಗಿದೆ.

ಹಳೆಯ ಸೋಫಾ ಕೊಟ್ಟು(ಕಡಿಮೆ ಬೆಲೆಗೆ) ಕೂಪನ್ ಸಹಿತ ಸೋಫಾ ಸೆಟ್ಟನ್ನು ಪಕ್ಕದ ಮನೆಯವರು ತಂದಿದ್ದಾರೆಂದು ನನ್ನ ಗೆಳತಿ(ಹೆಸರು ಬೇಡ)ಯೊಬ್ಬಳು ತಮ್ಮ ಮನೆಯಲ್ಲಿರುವ ಮರದ ಕುರ್ಚಿ,ಅಂದದ ಬೆಂಚುಗಳನ್ನು ವಿಕ್ರಯಿಸಿ ಹೊಸದನ್ನು ತನ್ನಿರೆಂದು ಗಂಡನಿಗೆ ಒತ್ತಾಯಿಸುತ್ತಿದ್ದಾಳೆ.ಗಂಡನಾದರೋ ಸರ್ಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತನಾದರೂ ಹಳ್ಳಿ ಮನೆಯಲ್ಲಿರುವ ತನ್ನ ತಂದೆ-ತಾಯಿ,ತಮ್ಮ-ತಂಗಿಯರ ಜವಾಬ್ದಾರಿ ಹೊತ್ತ ಹಿರಿ ಮಗ.ಕಚೇರಿಯಲ್ಲಿ ದಿನವಿಡೀ ದುಡಿದು ಮನೆಗೆ ಬಂದೊಡನೆ ಮಡದಿಯ ವರಾತ (ಅವಶ್ಯವಿಲ್ಲದಿದ್ದರೂ ಒಡನಾಡಿಗಳು ಹೊಂದಿದ-ಹೊಂದುವ ವಸ್ತು-ವಸ್ತ್ರ,ಒಡವೆಗಳಿಗೆ ಒತ್ತಾಯ).ಹೀಗಾಗಿ ಕಚೇರಿಯಲ್ಲಿ ಆಗಬೇಕಾದ ಕೆಲಸವನ್ನು(ಬೇಗ ಮಾಡಿಕೊಟ್ಟು ಲಂಚಕ್ಕಾಗಿ ಕೈಯೊಡ್ಡತೊಡಗಿದ್ದಾನೆ . ಮೊದಲೆಲ್ಲ ಪ್ರಾಮಾಣಿಕನಾಗಿ ಕೆಲಸ ಮಾಡುತ್ತ ಊರವರಿಂದ,ಗೆಳೆಯರಿಂದ ಶಿಫಾರಸ್ಸು ಹೊಂದಿದ್ದವನು ಗ್ರಹಸ್ಥನಾದ ಮೇಲೆ ಪತ್ನಿಯ ಬೇಡಿಕೆಗಳಿಗೆ ಸ್ಪಂದಿಸಿವುದೇ ಕರ್ತವ್ಯವೆಂದು ತಿಳಿದು ಲಂಚಕೋರನಾಗಿದ್ದಾನೆ.ಮುಂದುವರಿಯುತ್ತಿರುವ ದೇಶವೆಂದು ಭ್ರಷ್ಟಾಚಾರಕ್ಕೆ ಮುಂದುವರೆದ ದೇಶವಾಗಬಾರದೆಂಬ ಭಾವನೆ ಎಲ್ಲರದ್ದಾಗಬೇಕು.


ಎಲ್ಲರಂತೆ ವಸ್ತುಪ್ರಿಯಳಾದವಳು ನಾನಾದರೂ ನಮ್ಮ ಯಜಮಾನರ ಅಲ್ಪತ್ರಪ್ತತೆ,ಔದಾರ್ಯತೆ,ಕಾಠಿಣ್ಯತೆಗಳಿಂದಾಗಿ ನಾವಿಂದು ತ್ರಪ್ತ ಸುಖೀ ಜೀವನವನ್ನು ನಡೆಸುವಂತಾಗಿದೆ.ಪುರುಷರ ಉನ್ನತಿ ಅವನತಿಗೆ ಗ್ರಹಿಣಿಯರ ಪಾತ್ರವೇ ಮುಖ್ಯವೆಂದು ನಾವೆಲ್ಲ ತಿಳಿದು ಜೀವಿಸೋಣವೇ?

"ಇದ್ದುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ" ಎನ್ನುವುದನ್ನು ಸುಳ್ಳಾಗಿಸೋಣವೇ?




ಲಕ್ಶ್ಮಿ ಜಗದೀಶ ಭಟ್ಟ,ಬುರ್ಡೆ
Sudha,23 June 2005